Description
ಮೂಲತಃ ದಾವಣಗೆರೆ ಜಿಲ್ಲೆಯವರಾದ ಯಶಸ್ವಿನಿ ಎಸ್ ಎನ್ ಈಗ ಬೆಂಗಳೂರಿನ ನಿವಾಸಿ. ಮೈಸೂರು ವಿಶ್ವವಿದ್ಯಾಲಯದ ಬಿ ಎ ಜರ್ನಲಿಸಂ ಪದವೀಧರೆಯಾದ ಇವರು ಮೈಸೂರಿನಲ್ಲಿ ಒಂದು ವರ್ಷ ‘ದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ರಿಪೋರ್ಟರ್ ಆಗಿ ಹಾಗೂ ಟಿಸಿಎಸ್ ನಲ್ಲಿ ಬಿಸಿನೆಸ್ ಪ್ರಪೋಸಲ್ ರೈಟರ್ ಆಗಿ ಕೆಲಸ ಮಾಡಿದ್ದಾರೆ. ಮಗಳ “ಅಮ್ಮ, ಹೊಸ ಕತೆ” ಎಂಬ ಬೇಡಿಕೆಗೆ ‘ಚಿನ್ನಿಯ ರಜಾಯಿ’ ಹಾಗೂ ‘ಅಳಿಲು ಸೇವೆ’ ಎಂಬ ಎರಡು ಮುದ್ದಾದ ಮಕ್ಕಳ ಪುಸ್ತಕಗಳನ್ನು ಬರೆದ ಇವರು ಈಗ ಬಾಲ್ಯದ ದಿನಗಳಲ್ಲಿ ಎಲ್ಲರೂ ಆಡಿದ ಆಟವಾದ ಗೋಲಿ ಕುರಿತಾಗಿ ಬರೆದ ಮಕ್ಕಳ ಕತೆಯೇ ‘ಚಿಣ್ಣರ ಗೋಲಿ ಆಟ’. ಈ ಚಂದದ ಚಿಣ್ಣರ ಪುಸ್ತಕದ ಪ್ರತೀ ಪುಟದಲ್ಲೂ ಲಿಪ್ತಿ ರಾವ್ ಅವರು ಬಿಡಿಸಿದ ಬಣ್ಣಬಣ್ಣದ ಚಿತ್ರಗಳು ಮಕ್ಕಳನ್ನು ಮೋಡಿ ಮಾಡುವುದರಲ್ಲಿ ಎರಡು ಮಾತಿಲ್ಲ.