Description
ನಾವು ಚಿಕ್ಕವರಾಗಿದ್ದಾಗ, ನಮಗೆ ಕತೆಗಳು ಹೇಳಲಾದವು ಮತ್ತು ಅವು ನಮ್ಮಿಂದ ನಮ್ಮ ಮಕ್ಕಳಿಗೆ, ಹಾಗೇ ಅವರಿಂದ ಅವರ ಮಕ್ಕಳಿಗೆ ಹರಿದು ಬಂದಿವೆ. ‘ಹಿತೋಪದೇಶ’ ಎಂದರೆ ಒಳಿತಿಗಾಗಿ ಬುದ್ದಿವಾದ ಎಂದು. ಈ ನೀತಿಕಥೆಗಳು ನಮಗೆ ಮನರಂಜನೆ ನೀಡುವುದೇ ಅಲ್ಲದೆ, ಜೀವನದ ವಾಸ್ತವಿಕ ಸಮಸ್ಯೆಗಳೊಡನೆ ವ್ಯವಹರಿಸಲು ಸಹಾಯ ಮಾಡುವ ಪಾಠಗಳನ್ನು ಬೋಧಿಸುವುದಾಗಿವೆ.
ಹಿತೋಪದೇಶ ಸರಣಿಯು, ನಮ್ಮ ಇದೇ ರೀತಿಯ ‘ಏನ್ಸಿಯಂಟ್ ಟೇಲ್ಸ್ ಆಫ್ ವಿಟ್ ಅಂಡ್ ವಿಸ್ಡಮ್’ ಮತ್ತು ಜಾತಕದ ಕತೆಗಳಿಗೆ ಸೇರುವಂತದಾಗಿದ್ದು, ನಿಮ್ಮನ್ನು ಹಿಡಿದಿಡುವ, ಆಕರ್ಷಿಸುವ ಹಲವು ಪುರಾತನ ಕಥೆಗಳನ್ನು ಒಳಗೊಂಡಿವೆ. ಇಲ್ಲಿನ ಪ್ರತಿ ಕತೆಯು ಸಹ ನಮ್ಮ ನಿತ್ಯ ಜೀವನದಲ್ಲಿ ಬಹಳ ಪರಿಣಾಮವನ್ನು ಉಂಟು ಮಾಡುವ ಮುಖ್ಯ ಸಂದೇಶವನ್ನು ಹೊಂದಿದೆ.
ಇದು ನಯನ ಮನೋಹರ ವಿಲ್ಕೊ ಪಿಕ್ಚರ್ ಲೈಬ್ರರಿಯ 500 ಕ್ಕೂ ಮಿಗಿಲಾದ ಶೀರ್ಷಿಕೆ ಸರಣಿಯ ಭಾಗವಾಗಿದ್ದು, ವಿವಿಧ ವಿಷಯಗಳ ಬಗ್ಗೆ ಜ್ಜಾನ ನೀಡುವ, ನವೀನ ಮಾರ್ಗದಿಂದ ಪ್ರಾರಂಭಿಸುವ ಹಾಸ್ಯಯುಕ್ತ ಸಂಗ್ರಹ ಮಾಧ್ಯಮ ಕಲಾತ್ಮಕ ಕೆಲಸಗಳ ಮೂಲಕ ಆಕರ್ಷಕ ಚಿತ್ರಗಳಿಂದ ಕೂಡಿದ, ಸರಳ, ಆದರೆ ಕುತೂಹಲಕರ ವಿವರಣೆ, ಸಂವಾದಗಳಿಂದ ಕೂಡಿದ ಮಾರ್ಗವಾಗಿದ್ದು, ಕತೆ ಹೇಳುವಿಕೆಯನ್ನು ಒಂದು ಸಂತೋಷಯುಕ್ತತೆ ಅನುಭವವಾಗಿಸುತ್ತದೆ.