Description
ಹಿತೋಪದೇಶ ಸುಮಾರು ಸಾವಿರ ವರ್ಷಗಳ ಹಿಂದೆ ನಾರಾಯಣ ಪಂಡಿತ ಬರೆದ ಸಣ್ಣ ಕಥೆಗಳ ಮಹತ್ವದ ಸಂಕಲನ, ಈ ಕಥೆಗಳು ನೀತಿ ಮತ್ತು ಜ್ಞಾನದ ಅಮೂಲ್ಯ ನಿಧಿಯಾದ ಪಂಚತಂತ್ರದ ಕಥೆಗಳಿಗೆ ಹೆಚ್ಚು ಕಡಿಮೆ ಸಮಾನವಾಗಿವೆ. ಈ ಕಥೆಗಳಲ್ಲಿ ಪ್ರಾಣಿಗಳು ಮತ್ತು ಪಕ್ಷಿಗಳೇ ಮುಖ್ಯ ಪಾತ್ರಗಳು, ‘ಹಿತೋಪದೇಶ’ ಎರಡು ಶಬ್ದಗಳಿಂದಾಗಿದೆ. ‘ಹಿತ’ ಎಂದರೆ ಕ್ಷೇಮ ಅಥವಾ ಪ್ರಯೋಜನ ಮತ್ತು ‘ಉಪದೇಶ’ ಎಂದರೆ ಬುದ್ಧಿವಾದ ಅಥವಾ ಸಲಹೆ, ಅಂದರೆ ‘ಹಿತೋಪದೇಶ ಪ್ರತಿಯೊಬ್ಬರ ಕ್ಷೇಮ ಮತ್ತು ಪ್ರಯೋಜನಕ್ಕಾಗಿ ಬುದ್ಧಿವಾದ ಮತ್ತು ಮಾರ್ಗದರ್ಶನ ನೀಡುವ ಕಥೆಗಳ ಸಂಗ್ರಹ. ಅದು ಅತ್ಯಂತ ವ್ಯಾಪಕವಾಗಿ ಓದುವ ಮಕ್ಕಳ ಪುಸ್ತಕ, ಈಗಿನ ಪ್ರಪಂಚದಲ್ಲೂ ಕೂಡ, ತಮ್ಮ ಸರಳ ಆದರೆ ಅರ್ಥಪೂರ್ಣವಾದ ಕಥೆಗಳಿಂದ ಜನರಲ್ಲಿ ಅಚ್ಚರಿ ಮತ್ತು ಆಸಕ್ತಿ ಮೂಡಿಸುತ್ತಿದೆ. ಇಲ್ಲಿ ಹಿತೋಪದೇಶದ ಕೆಲವು ಅತ್ಯಂತ ಆಸಕ್ತಿಪೂರ್ಣ ಕಥೆಗಳನ್ನು ನೀಡುತ್ತಿದ್ದೇವೆ. ಕಿರಿಯ ಓದುಗರು ಇವುಗಳನ್ನು ಓದಿ ಸಂತೋಷಪಡುವರೆಂದು ಭಾವಿಸುತ್ತೇವೆ.