Description
‘ನಗುವು ಸಹಜ ಧರ್ಮ’ ಎಂದಿದ್ದಾರೆ ಮಾನ್ಯ ಡಿ.ವಿ.ಜಿ. ಆದರೆ ಇಂದಿನ ದಿನಗಳಲ್ಲಿ ಸಹಜ ಅಂತಿರಲಿ, ಕೃತಕ ನಗುವಿಗೂ ಬರ ಬಂದಿದೆ. ಎಲ್ಲೆಲ್ಲೂ ಧಾವಂತ – ಆತಂಕ – ದುಗುಡ ತುಂಬಿದ ಮುಖಗಳೇ. ಜನರನ್ನು ನಗಿಸುವುದೆಂತು? ನಗೆ ಕ್ಲಬ್ಬುಗಳೇ ತಲೆ ಎತ್ತಿವೆ. ನಗು ಟಾನಿಕ್‌ನಂತೆ ಎಂದು ವೈದ್ಯರು ಪೂಸಿ ಮಾಡುತ್ತಾರೆ. ನಕ್ಕರೆ ಸ್ವರ್ಗ ಎಂದು ನಗೆ ಸಾಹಿತಿಗಳು ಓದುಗನ ಬೆನ್ನು ಹತ್ತಿದ್ದಾರೆ. ಅವರಲ್ಲೊಬ್ಬರು ಸಂಪಟೂರು ವಿಶ್ವನಾಥ್. ನಗೆ ಮಿಂಚು ಕೊಂಚ ಮುಖಕ್ಕೆ ಬಡಿದು ಕ್ಷಣಕಾಲ ಬೆಳಗಲೆಂದು ಯತ್ನಿಸಿದ್ದಾರೆ.
ಲೇಖಕರಾದ ಶ್ರೀ ಸಂಪಟೂರು ವಿಶ್ವನಾಥ್ ಅವರು ಎಂ. ಎಸ್ಸಿ. (ಸಸ್ಯಶಾಸ್ತ್ರ), ಬಿ. ಎಡ್. ಪದವೀಧರರು. ಗಾಂಧಿನಗರದ ಪ್ರೌಢನ್ನತ ಶಾಲೆಯಲ್ಲಿ ವೃತ್ತಿ ಆರಂಭಿಸಿದ ಇವರು 1996ರಲ್ಲಿ ಅದೇ ಶಾಲೆಯ ಪ್ರಿನ್ಸಿಪಾಲರಾಗಿ ನಿವೃತ್ತ ರಾದರು. ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಇವರ ವ್ಯಕ್ತಿತ್ವ ವಿಕಸನ, ವಿಜ್ಞಾನ ರಸಪ್ರಶ್ನೆ, ಲಘು ಪ್ರಬಂಧ, ಹಾಸ್ಯಕ್ತಿಗಳು, ಶಿಶುಕವನ ಮುಂತಾದ ಹಲವು ಲೇಖನಗಳು ಪ್ರಕಟಗೊಂಡಿವೆ.