E-kali

ಹತ್ತು ಪುಟಾಣಿ ಬೆರಳುಗಳು

105.00

Categories: ,

Description

ಕಳೆದ ಇಪ್ಪತ್ತು ವರ್ಷಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚಿನ ಶಾಲೆಗಳಲ್ಲಿ ಲೇಖಕರು ನಡೆಸಿದ ವಿಜ್ಞಾನ ಚಟುವಟಿಕೆಗಳ ಫಲವೇ ಈ ಪುಸ್ತಕ. ವಿವರವಾದ ಚಿತ್ರಗಳ ಸಹಿತ ಪ್ರತಿ ಚಟುವಟಿಕೆಯನ್ನು ಸ್ಪಷ್ಟವಾಗಿ ತಿಳಿಸಲಾಗಿದೆ. ಮಕ್ಕಳು ವಿಜ್ಞಾನ ಚಟುವಟಿಕೆಗಳನ್ನು ಮಾಡುವುದಕ್ಕೆ ಅತ್ಯಾಧುನಿಕ ಪ್ರಯೋಗಾಲಯಗಳು ಮತ್ತು ದುಬಾರಿ ಬೆಲೆಯ ಉಪಕರಣಗಳು ಬೇಕಿಲ್ಲ. ಮನೆಯಲ್ಲಿನ ನಿರುಪಯೋಗಿ ವಸ್ತುಗಳನ್ನು ಉಪಯೋಗಿಸಿಕೊಂಡು ಹಲವಾರು ಚಟುವಟಿಕೆಗಳನ್ನು ಮಾಡಬಹುದು. ಮಕ್ಕಳು ಸಾಮಾನ್ಯವಾದ ವಸ್ತುಗಳನ್ನು ಬಳಸಿದಾಗ ಮಾತ್ರ ಅವರು ದಿನನಿತ್ಯ ಜೀವನದಲ್ಲಿ ವಿಜ್ಞಾನದ ಪ್ರಸ್ತುತತೆಯನ್ನು ಮನಗಾಣಬಲ್ಲರು.

ಈ ಮಸ್ತಕದ ಲೇಖಕರಾದ ಶ್ರೀ ಅರವಿಂದ ಗುಪ್ತ ಕಾನುರದ ಭಾರತೀಯ ತಂತ್ರಜ್ಞಾನ ಸಂಸ್ಥೆ (I.I.T.) ಯಿಂದ 1975ರಲ್ಲಿ ಎಲೆಕ್ಟಿಕಲ್‌ ಇಂಜಿನಿಯರ್ ಪದವಿ ಪಡೆದರು. ಇವರು ವಿಜ್ಞಾನ ಚಟುವಟಿಕೆಗಳ ಬಗ್ಗೆ ಹತ್ತು ಪುಸ್ತಕಗಳನ್ನು ಬರೆದಿದ್ದಾರೆ. ಐವತ್ತಕ್ಕಿಂತಲೂ ಹೆಚ್ಚಿನ ಪುಸ್ತಕಗಳನ್ನು ಅನುವಾದಿಸಿದ್ದಾರೆ ಹಾಗೂ ವಿಜ್ಞಾನ ಚಟುವಟಿಕೆಗಳ ಬಗ್ಗೆ ಎಪ್ಪತ್ತು ಚಲನಚಿತ್ರಗಳನ್ನು ಸಿದ್ಧಪಡಿಸಿದ್ದಾರೆ. ಅವರಿಗೆ ಹಲವು ಪ್ರಶಸ್ತಿ ಸಂದಿವೆ. ಮಕ್ಕಳಿಗೆ ವಿಜ್ಞಾನ ಜನಪ್ರಿಯಗೊಳಿಸುವುದಕ್ಕೆ ಮೊದಲ ರಾಷ್ಟ್ರ ಪ್ರಶಸ್ತಿ ಹಾಗೂ ಮಕ್ಕಳಿಗೆ ವಿಜ್ಞಾನದಲ್ಲಿ ಕುತೂಹಲ ಬೆಳೆಸಿದ್ದಕ್ಕಾಗಿ ಕಾನ್ಪುರದ ಐ.ಐ.ಟಿ.ಯಿಂದ ಪ್ರತಿಷ್ಠಿತ ಹಳೆಯ ವಿದ್ಯಾರ್ಥಿ ಪ್ರಶಸ್ತಿಗಳು ಪ್ರಮುಖವಾದವು.

ಅವಿನಾಶ ದೇಶಪಾಂಡೆಯವರು ಮುಂಬೈನ ಜೆ.ಜೆ. ಕಲಾಶಾಲೆಯಿಂದ ಪದವಿ ಪಡೆದಿದ್ದಾರೆ. ಅವರು ಬುಡಮಟ್ಟದ ಚಳವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅನುವಾದಕ ಡಾ. ಎಚ್‌.ಎಸ್‌. ನಿರಂಜನ ಆರಾಧ್ಯ ಅವರು ಪ್ರಸಿದ್ಧ ವಿಜ್ಞಾನ ಲೇಖಕರು.

ಟ್ರಸ್ಟ್‌ಗಾಗಿ ಇನ್ನೂ ಕೆಲವು ಪುಸ್ತಕಗಳನ್ನು ಅವರು ಅನುವಾದಿಸಿದ್ದಾರೆ.

×

Hello!

Click one of our contacts below to chat on WhatsApp

× How can I help you?