Description
ಈ ಪುಸ್ತಕದ ಮುಖ್ಯ ಉದ್ದೇಶ, 10ರಿಂದ 13 ವಯೋಮಿತಿಯೊಳಗಿನ ವಿದ್ಯಾರ್ಥಿ ಸಮೂಹಕ್ಕೆ ತಮ್ಮ ವೈಜ್ಞಾನಿಕ ಜ್ಞಾನವನ್ನು ಕ್ರೋಢೀಕರಿಸಿಕೊಳ್ಳುವುದರ ಜೊತೆಗೆ ಅಭಿವೃದ್ಧಿ ಪಡಿಸಿಕೊಳ್ಳುವುದು. ಇದುವರೆಗೆ ಕಲಿತಿರುವ ಮೂಲ ವೈಜ್ಞಾನಿಕ ವಿಷಯಗಳನ್ನು, ಕಾರಣಾಂತರಗಳಿಂದ ಮರೆತಿರಬಹುದಾದುದನ್ನು ಬೇಗ ಪುನರಾವರ್ತನೆ ಮಾಡಿ ಪ್ರೌಢಶಾಲಾ ಮಟ್ಟದ ಜಯಪ್ರದ ಜೀವನಕ್ಕೆ ತಕ್ಕಷ್ಟು ತಯಾರಾಗಿದ್ದಾರೆಂದು ಖಾತ್ರಿ ಮಾಡಿಕೊಳ್ಳುವುದಾಗಿದೆ.
ಯಾವ ರೀತಿಯಲ್ಲೂ ಕಡಿಮೆಯಲ್ಲದ ಇನ್ನೊಂದು ಉದ್ದೇಶವೆಂದರೆ, ಆಂತರಿಕ ಪರೀಕ್ಷೆಗಳಿಗೆ ತಯಾರುಮಾಡುವುದು, ಬಾಯಿಪಾಠದಿಂದ ಬೇಸರ ಉಂಟಾಗದಂತೆ ನೋಡಿಕೊಳ್ಳುವುದು ಮತ್ತು ಸರಳ ಸಂಶೋಧನೆಗೆ ಅವಕಾಶ ಕಲ್ಪಿಸುವುದು, ಹಾಗೂ ವಿದ್ಯಾರ್ಜನೆಗೆ ಪ್ರೋತ್ಸಾಹ ನೀಡುವುದಾಗಿದೆ.