Description
ವಿಕ್ರಮ ಮತ್ತು ಬೇತಾಳನ ಕಥೆಗಳು ಮೂಲತಃ ಸಂಸ್ಕೃತದಲ್ಲಿ ರಚಿತವಾಗಿವೆ ಮತ್ತು ಅನೇಕ ಶತಮಾನಗಳಿಂದ ಭಾರತದ ಕಿನ್ನರ ಕಥೆಗಳ ಅವಿಭಾಜ್ಯ ಅಂಗವಾಗಿವೆ. ಐತಿಹ್ಯದ ಪ್ರಕಾರ, ಉಜ್ಜಯಿನಿಯ ರಾಜನಾದ ವಿಕ್ರಮ, ಒಬ್ಬ ಸನ್ಯಾಸಿಗೆ ಬೇತಾಳನನ್ನು (ಪಿಶಾಚಿಯನ್ನು) ತಂದು ಕೊಡುವುದಾಗಿ ಭಾಷೆ ಕೊಟ್ಟಿರುತ್ತಾನೆ. ನಿಬಂಧನೆಯೆಂದರೆ, ರಾಜ ಸಂಪೂರ್ಣ ಮೌನದಲ್ಲಿ ಆ ಪಿಶಾಚಿಯನ್ನು ತರಬೇಕು, ಇಲ್ಲವಾದರೆ ಆ ಪಿಶಾಚಿ ಶವದ ಸಹಿತ ಮರಕ್ಕೆ ಹಾರಿಹೋಗುತ್ತದೆ. ವಿಕ್ರಮ ಆ ಶವವನ್ನು ಹೊತ್ತುಕೊಳ್ಳುತ್ತಿದ್ದಂತೆ ಅದರಲ್ಲಿದ್ದ ಬೇತಾಳ ಅಥವಾ ಪಿಶಾಚಿ ಒಂದು ಕಥೆ ಹೇಳಲು ಆರಂಭಿಸುತ್ತದೆ. ಪ್ರತಿ ಕಥೆಯ ಕಡೆಯಲ್ಲಿ ತನ್ನ ಪ್ರಶ್ನೆಗೆ ಉತ್ತರ ಹೇಳುವಂತೆ ಒತ್ತಾಯಿಸಿ, ಅವನ ಮೌನಕ್ಕೆ ಭಂಗ ತರುತ್ತದೆ.
ವಿಕ್ರಮ ಮತ್ತು ಬೇತಾಳನ ಕಥೆಗಳ ಸಂಗ್ರಹವನ್ನು ನಮ್ಮ ಕಿರಿಯ ಓದುಗರಿಗೆ ನೀಡುತ್ತಿದ್ದೇವೆ. ಇವುಗಳಲ್ಲಿ ವಿಸ್ಮಯಕಾರಿ ಅಂತ್ಯ ಮತ್ತು ನೀತಿಯಿದೆ. ಮಕ್ಕಳಿಗೆ ಇವು ಪ್ರಿಯವಾಗುತ್ತವೆಂಬ
ಭರವಸೆಯಿದೆ.