Description
ಮುನ್ನುಡಿ ಬರೆಯುವುದೇ ಕಷ್ಟ. ಇನ್ನು ನಾಟಕ ಬರೆಯುವುದು ಬಹಳ ಕಷ್ಟ. ಅದರಲ್ಲಿಯೂ ಮಕ್ಕಳಿಗಾಗಿಯೇ ನಾಟಕ ಬರೆಯಲು ಹೊರಡುವುದು ಸಾಹಸವೇ ಸರಿ. ಮಕ್ಕಳ ನಾಟಕಗಳು ಅವರ ಮನಸ್ಸಿಗೆ ನಾಟುವಂತೆ ಇರಬೇಕು. ಅವರ ಎಳೆಯ ಹೃದಯಗಳು ಮಿಡಿಯುವಂತೆ ಆಗಬೇಕು. ಕೇವಲ ಕಚಗುಳಿಯಿಟ್ಟರಷ್ಟೇ ಸಾಲದು, ಅವರ ಜ್ಞಾನವನ್ನೂ ತಿಳುವಳಿಕೆಯನ್ನೂ ಹೆಚ್ಚಿಸುವಂತಿರಬೇಕು. ಪ್ರಸ್ತುತ ನಾಟಕಗಳ ಲೇಖಕರು ಇಷ್ಟನ್ನೂ ನೆನಪಿನಲ್ಲಿಟ್ಟುಕೊಂಡು, ಮಕ್ಕಳಿಗೆ ನಮ್ಮ ಸಂಸ್ಕೃತಿಯ ಪರಿಚಯ ಮಾಡಿಸಿ, ಅದರಲ್ಲಿರುವ ಕೆಲವು ಸ್ಥಿರ ಮೌಲ್ಯಗಳನ್ನು ಮಕ್ಕಳಲ್ಲಿ ನೆಡುವ ಪ್ರಯತ್ನ ಮಾಡಿದ್ದಾರೆ. ಇವು ಮಕ್ಕಳಿಗಾಗಿ, ಪ್ರದರ್ಶನಕ್ಕೆಂದೇ ಬರೆಯಲಾಗಿರುವ ನಾಟಕಗಳಾಗಿವೆ.