Description
ಪಾಂಡವರು ಹಾಗೂ ಕೌರವರ ದಾಯಾದಿ ಜಗಳ ಯುದ್ಧದಲ್ಲಿ ಕೊನೆಗೊಳ್ಳುವುದು. ಮಹಾಭಾರತದ ಮೂಲಕಥೆಯ ಅಡಿಯಲ್ಲಿ ಅನೇಕ ಉಪಕಥೆಗಳು ಹುದುಗಿವೆ. ಹೀಗಾಗಿ ಮಹಾಭಾರತ, ಕಥೆಗಳ ಕೊಪ್ಪರಿಗೆಯಾಗಿದೆ. ಭೀಷ್ಠ, ಕೃಷ್ಣ, ಅರ್ಜುನ, ಘಟೋತ್ಕಚ, ಭೀಮ, ಅಭಿಮನ್ಯು, ಕರ್ಣ ಹೀಗೆ ಭಿನ್ನ ಪಾತ್ರಗಳಿಂದ ನಾನಾ ಮುಖಗಳನ್ನು ಪರಿಚಯಿಸಿ, ಮಕ್ಕಳ ಮೇಲೆ ಪ್ರಭಾವ ಬೀರಬಲ್ಲ ಕೃತಿ-ಮಹಾಭಾರತ.
ಇಂತಹ ಮಹಾಭಾರತವನ್ನು ಮಕ್ಕಳಿಗಾಗಿ ಸರಳವಾದ ಭಾಷೆಯಲ್ಲಿ ಚಿತ್ರ ಸಹಿತವಾಗಿ ಹೊರತರುವ ಪ್ರಯತ್ನ ಈ ಪುಸ್ತಕದಲ್ಲಾಗಿದೆ.