Description
ಭೀಷ್ಠ ಜೀವದಾಹಿನಿಯಾದ ಸುಂದರ ದೇವತೆ ಗಂಗಾದೇವಿಗೆ ಮಹಾನ್ ಪುತ್ರನಾಗಿ ಜನಿಸಿದ. ಅವನು ಸುಂದರ ಮತ್ತು ಬುದ್ದಿವಂತ ಮಾತ್ರವಲ್ಲದೆ, ರಣರಂಗದಲ್ಲಾಗಲಿ, ರಾಜಾಸ್ಥಾನದಲ್ಲಾಗಲಿ ಅಷ್ಟೇ ಸಮರ್ಥನಾಗಿದ್ದ. ಈ ಕಥೆ ಭೀಷ್ಮನ ಅತ್ಯಪೂರ್ವವಾದ ಪ್ರಾಮಾಣಿಕತೆ ಮತ್ತು ದಯಾಗುಣವನ್ನು ನಿರೂಪಿಸುತ್ತದೆ. ರಾಜತ್ವವನ್ನು ಅದರ ಸುಖ ಭೋಗಗಳಿಲ್ಲದೆ, ಸಂಕಷ್ಟಗಳನ್ನೇ ಅನುಭವಿಸುವುದು ಯಾರಿಂದ ತಾನೆ ಸಾಧ್ಯ? ತನ್ನ ತಂದೆಗೆ ನೀಡಿದ ವಚನವನ್ನು ಪಾಲಿಸಲು ಸುದೀರ್ಘ ವರ್ಷಗಳ ಒಂಟಿತನವನ್ನು ಯಾರು ತಾನೆ ಅನುಭವಿಸಬಲ್ಲರು?