Description
ಮೃತ ಹೆಂಗಸಿನ ಕಾಲುಗಳು ಮೆಲ್ಲನೆ ನನ್ನ ಕೆನ್ನೆಯನ್ನು ತಟ್ಟಿದುವು! ಒಂದೇ ಒಂದು ಶಬ್ಧವೂ ಇಲ್ಲ! ಮತ್ತೆ ಕಾಲುಗಳು ಅಲ್ಲಾಡಿದುವು! ಶವ ಸಜೀವ ವಾಗುತ್ತಿದೆಯೆ? ನನಗೆ ಗಾಬರಿಯಾಯ್ತು. ಕೋವಿಯನ್ನು ಟಾರ್ಚನ್ನೂ ತೆಗೆದುಕೊಂಡು ಅಲ್ಲಾಡುವ ಹೆಣದ ಪಕ್ಕದಿಂದೆದ್ದು ಓಡಬೇಕು, ಅಷ್ಟರಲ್ಲಿ ನನ್ನ ವಾಸ್ತವ ಪ್ರಜ್ಞೆ ಮರಳಿತು. ಆ ಕಾಲೂ ಅದರ ವಾರಸುದಾರರೂ ಮತ್ತೆ ಸಜೀವ ಗೊಂಡಿಲ್ಲ! ನರಭಕ್ಷಕ ಅದನ್ನು ಸಜೀವ ಗೊಂಡಂತೆ ಅಲ್ಲಾಡಿಸುತ್ತಿದೆ. ಶವದ ಅಲುಗಾಟದ ಕಾರಣ ನನ್ನ ತಲೆಗೆ ಹೊಳೆಯುವ ಹೊತ್ತಿಗಾಗಲೇ ಬೆವರಿನಿಂದ ನನ್ನ ಮೈಯ್ಯಲ್ಲಾ ತೊಯ್ದು ಹೋಗಿತ್ತು.