Description
ಈ ಮಸ್ತಕವು ಭೌತಶಾಸ್ತ್ರ, ರಸಾಯನ ಶಾಸ್ತ್ರ ಮತ್ತು ಜೀವಶಾಸ್ತ್ರಕ್ಕೆ ಸಂಬಂಧಿಸಿದ 102 ಪಾಯೋಗಿಕ ವಿಜ್ಞಾನ ಪ್ರಾಜೆಕ್ಟ್‌ಗಳನ್ನು ಒಳಗೊಂಡಿದೆ. ಈ ಮಸ್ತಕವನ್ನು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಮತ್ತು ವೈಜ್ಞಾನಿಕ ಪ್ರಯೋಗಗಳನ್ನು ಮಾಡುವ ಆಸಕ್ತರಿಗಾಗಿ ಸಿದ್ಧಪಡಿಸಲಾಗಿದೆ. ಈ ಪುಸ್ತಕದಲ್ಲಿನ ಪ್ರಯೋಗಗಳು ಪ್ರಾಯೋಗಿಕ ಪ್ರಾಜೆಕ್ಟ್‌ಗಳ ಸಂಗ್ರಹವಾಗಿದೆ. ಇದರಲ್ಲಿನ ಮಾಹಿತಿಯು ವೈಜ್ಞಾನಿಕ ಪದ್ಧತಿಯಲ್ಲಿ ಪ್ರಯೋಗಳನ್ನು ಮಾಡುವ ವಿಧಾನ ಒಳಗೊಂಡಿದ್ದು, ವಿದ್ಯಾರ್ಥಿಗಳಿಗೆ ವಿಜ್ಞಾನದ
ಪ್ರಾಜೆಕ್ಟ್‌ಗಳಲ್ಲಿ ನೆರವಾಗುತ್ತದೆ. ವಿಜ್ಞಾನದ ಪ್ರಾಜೆಕ್ಟ್‌ಗಳನ್ನು ಯಶಸ್ವಿಯಾಗಿ ಮಾಡಬೇಕಾದರೆ, ವೈಜ್ಞಾನಿಕವಾದ ಮತ್ತು ವ್ಯವಸ್ಥಿತ ಮಾರ್ಗವನ್ನು ಅನುಸರಿಸಬೇಕಾಗುತ್ತದೆ, ಫಲಿತಾಂಶ ಸರಿಯಾಗಿ ಬರಬೇಕಾದಲ್ಲಿ ಸರಿಯಾದ ವಿಧಾನದಲ್ಲಿಯೇ ಪ್ರಯೋಗ ಮಾಡಬೇಕು. ಈ ಪುಸ್ತಕದಲ್ಲಿನ ಪ್ರಾಯೋಗಿಕ ಪ್ರಯೋಗಗಳು, ವಿದ್ಯಾರ್ಥಿಗಳಿಗೆ ಪ್ರಯೋಗ ಮಾಡುವಾಗ ಸರಿಯಾದ ವಿಧಾನವನ್ನು ಸೂಚಿಸುತ್ತದೆ. ಅಲ್ಲದೇ ವೈಜ್ಞಾನಿಕವಾಗಿ ಪಡೆದ ಫಲಿತಾಂಶವನ್ನು ವಿಶ್ಲೇಷಿಸುವ ನಿಟ್ಟಿನಲ್ಲಿ ಕೂಡ ಈ ಪುಸ್ತಕ ಉಪಯುಕ್ತವಾಗಿದೆ.