Description
ಪಂಚತಂತ್ರ ಪ್ರಾಚೀನ ಭಾರತೀಯ ಕಲ್ಪಿತ ಕಥೆಗಳ ಸಂಗ್ರಹವಾಗಿದೆ. ಅನೇಕ ಬಾರಿ ಮುಖ್ಯ ಪಾತ್ರಗಳು ಪ್ರಾಣಿಗಳು ಮತ್ತು ಪಕ್ಷಿಗಳಾಗಿರುತ್ತವೆ. ಅವು ವಿವಿಧ ಕಥೆಗಳಲ್ಲಿ ಬಹುತೇಕ ಅನನ್ಯ ಗುಣಲಕ್ಷಣಗಳನ್ನು ಪ್ರದರ್ಶಿಸುತ್ತವೆ ಮತ್ತು ಬೆಲೆಯುಳ್ಳ ಜೀವನದ ಪಾಠಗಳನ್ನು ಮತ್ತು ನೀತಿಗಳನ್ನು ತಿಳಿಸಿಕೊಡುತ್ತವೆ. ಈ ಪುಸ್ತಕದಲ್ಲಿ ಪಂಚತಂತ್ರ ಕಥೆಗಳ ಭಂಡಾರದಿಂದ ಅರಿಸಿರುವ ಆರು ಶ್ರೇಷ್ಠ ಕಥೆಗಳನ್ನು ಓದಿ. ಮೂರು ಪುಟ್ಟ ಮೀನು ಗೆಳತಿಯರು ಅವುಗಳಲ್ಲಿ ಒಂದು ಜಾಣ ಆಗಿದ್ದರೆ ಇನ್ನೊಂದು ಚುರುಕಾಗಿದ್ದು ಮತ್ತೊಂದು ಸೋಮಾರಿಯಾಗಿರುವುದು; ಕೆಂಪು ದುಂಡು ಹಣ್ಣುಗಳಿಂದ ತಾವು ಬೆಂಕಿಯನ್ನು ಹೊತ್ತಿಸಬಹುದು ಎಂದು ಭಾವಿಸಿದ್ದ ಮೂರು ಅವಿವೇಕಿ ಕಪಿಗಳು ಮತ್ತು ಇನ್ನೂ ಹೆಚ್ಚಿನದನ್ನು ಓದಿ.
ಪ್ರಕಾಶಕರು – ಸಪ್ನ ಬುಕ್ ಹೌಸ್