Description
ಮಕ್ಕಳು ಕುಟುಂಬದ ಮತ್ತು ಸಮಾಜದ ಆಸ್ತಿ. ಅವರೇ ನಾಳಿನ ಪ್ರಜೆಗಳು ಹಾಗೂ ನಾಯಕರು. ಮಕ್ಕಳ ಶಾರೀರಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಎಲ್ಲ ಬಗೆಯ ಅವಕಾಶಗಳನ್ನೂ ಕಲ್ಪಿಸಿಕೊಡುವುದು ತಂದೆ ತಾಯಿಗಳ ಮತ್ತು ಸಮಾಜದ ಅತ್ಯಂತ ಮುಖ್ಯ ಕರ್ತವ್ಯವಾಗಿರುತ್ತದೆ. ಅದೇ ರೀತಿ ಅವರು ಮಾನಸಿಕವಾಗಿ, ಸಾಮಾಜಿಕವಾಗಿ ಒಳ್ಳೆ ರೀತಿಯಲ್ಲಿ ಬೆಳೆಯುತ್ತಿದ್ದಾರೆಯೇ ಎಂಬುದನ್ನು ಸಹ ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. ಇದು ಸಹ ಮಕ್ಕಳ ವಿಷಯದಲ್ಲಿ ಮನೆಯವರ ಹಾಗೂ ಸಮಾಜದ ಅತ್ಯಂತ ಮುಖ್ಯ ಹೊಣೆಯಾಗುತ್ತದೆ.