Description
ನಮ್ಮ ದೇಹದ ವಿಜ್ಞಾನ’ ಎಂಬುದೇ ವಿಸ್ಮಯಕಾರಿ ಪರಿಕಲ್ಪನೆ, ಮಾನವನ ದೇಹವನ್ನು ಬಿಡಿ ಬಿಡಿಯಾಗಿ ಈ ಕೃಷಿಯಲ್ಲಿ ಪರಿಚಯ ಮಾಡಿಕೊಡಲಾಗಿದೆ. ನಮ್ಮ ದೇಹದ ಬಗ್ಗೆ ಹಾಗೂ ಅದರಲ್ಲಿ ಹೊಂದಾಣಿಕೆಯಿಂದಿರುವ ವಿವಿಧ ಅಂಗಾಂಗಗಳ ರಚನೆ ಮತ್ತು ಕಾರ್ಯ ವಿಧಾನಗಳ ಬಗ್ಗೆ ಅನೇಕ ಪುಸ್ತಕಗಳು ಲಭ್ಯವಿದೆ. ಆದರೆ ನಮ್ಮ ದೇಹದಲ್ಲಿ ಅಡಕವಾಗಿರುವ ಭೌತವಿಜ್ಞಾನ, ರಸಾಯನವಿಜ್ಞಾನ, ಗಣಿತ ಹಾಗೂ ಎಂಜಿನಿಯರಿಂಗ್ ಅಂಶಗಳನ್ನು ಇಲ್ಲಿ ಹಕ್ಕಿ ಹೆಕ್ಕಿ ತೆಗೆದು ಪರಿಚಯಿಸಿರುವ ಪರಿ ಅನನ್ಯ; ಕನ್ನಡದಲ್ಲಿ ಇದು ಒಂದು ಹೊಸ ಪ್ರಯೋಗ, ಇಲ್ಲಿ ನಿರೂಪಿಸಿರುವ ದಾಟಿ ವಿದ್ಯಾರ್ಥಿ ಮತ್ತು ಅಧ್ಯಾಪಕರನ್ನಷ್ಟೇ ಅಲ್ಲ, ಜನ ಸಾಮಾನ್ಯರನ್ನೂ ಓದಲು ಪ್ರೇರೇಪಿಸುತ್ತದೆ. ಇದೊಂದು ‘ದೇಹದ ಜ್ಞಾನಕೋಶ’. ಇಲ್ಲಿನ ಭಾಷೆ ಸರಳ, ಓದು ಸರಾಗ ಬಹುವರ್ಣದಲ್ಲಿ ಪ್ರಕಟವಾಗಿರುವುದು ಸಂಪುಟದ ಆಕರ್ಷಣೆಯನ್ನು ಹೆಚ್ಚಿಸಿದೆ.