Description
ನಡು ಬೇಸಗೆಯ ರಾತ್ರಿಯೊಂದರ ಕನಸು, ವಿಲಿಯಂ ಷೇಕ್ಸ್ ಪಿಯರ್ ನ ಸುಖಾಂತ ನಾಟಕಗಳಲ್ಲಿ ಪ್ರಸಿದ್ಧವಾದ ನಾಟಕವಾಗಿದೆ. ಇಲ್ಲಿ ಕಿನ್ನರ ರಾಜನ ನೆರವಿನಿಂದ ನಾಲ್ವರೂ ಪ್ರೇಮಿಗಳ ಇಷ್ಟಾರ್ಥ ಸಿದ್ಧಿಸುತ್ತದೆ. ದಿಮೆಟ್ರಿಯಸ್ ಮೊದಲು ಹೆಲೆನ್‌ನನ್ನು ಪ್ರೀತಿಸದಿದ್ದರೂ ನಂತರ ಆಕೆಯನ್ನು ಪ್ರೀತಿಸತೊಡಗುತ್ತಾನೆ. ಪಕ್ನಿಂದ ಸ್ವಲ್ಪ ಗಡಿಬಿಡಿಯಾಗಿದ್ದರೂ ಕನ್ನಡ ರಾಜನ ವಿವೇಚನೆಯಿಂದ ಎಲ್ಲವೂ ಸುಖಾಂತವಾಗಿ ಬಿಡುತ್ತದೆ. ಸಣ್ಣ ಮಕ್ಕಳಿಗೆ ಷೇಕ್ಸ್‌ಪಿಯರ್‌ನನ್ನು ಪರಿಚಯಿಸುವ ಉದ್ದೇಶದಿಂದ ಈ ಕೃತಿಯನ್ನು ಹೊರ ತರಲಾಗಿದೆ. ಮಕ್ಕಳಿಗೆ ಮಹಾನ್ ಕೃತಿಗಳ ಪರಿಚಯ ಮಾಡಿಕೊಡುವ ಉದ್ದೇಶ ಸಹ ಇಲ್ಲಿದೆ.