Description
ಪ್ರಪಂಚವೆಲ್ಲಾ ಸ್ತಬ್ಧವಾಗಿಬಿಟ್ಟಿದೆ. ಬೀದಿಗಳೆಲ್ಲಾ ನಿರ್ಜನವಾಗಿವೆ. ಶಾಲೆಗಳು ಮುಚ್ಚಲ್ಪಟ್ಟಿವೆ. ಕೆಲಸಗಳೆಲ್ಲಾ ನಿಂತುಹೋಗಿವೆ. ಜನ ಯಾವಾಗಲೂ ‘ಕರೋನಾ’ ಎಂಬ ಪದವನ್ನು ಪಿಸುಗುಟ್ಟುತ್ತಲೇ ಇದ್ದಾರೆ.
ಜಮ್ಲೊ ಬಹುದೂರದ ಹಾದಿಯನ್ನು ತನ್ನ ಜೊತೆಯ ನೂರಾರು ಗಂಡಸರು, ಹೆಂಗಸರು ಮತ್ತು ಮಕ್ಕಳೊಂದಿಗೆ ಕಾಲ್ನಡಿಗೆಯಿಂದ ಕ್ರಮಿಸುತ್ತಿದ್ದಾಳೆ ಮತ್ತು ಅವರನ್ನು ತಾರಾ ತನ್ನ ಲ್ಯಾಪ್‌ಟಾಪ್ ಪರದೆಯಲ್ಲಿ ನೋಡುತ್ತಿದ್ದಾಳೆ.
ಬೀದಿಗಳೆಲ್ಲಾ ನಿರ್ಜನವಾಗುತ್ತಿರುವುದನ್ನು ರಾಹುಲ್ ನೋಡುತ್ತಿರುವಾಗಲೇ ಜಮ್ಲೊ ಹೆಜ್ಜೆ ಹಾಕುತ್ತಾಳೆ.
ಜಮ್ಲೊ ದಯೆ, ನ್ಯಾಯ ಮತ್ತು ಸಮಾನತೆಯ ಅಗತ್ಯವಿರುವ ಜಗತ್ತಿನಲ್ಲಿ ಹೆಜ್ಜೆ ಹಾಕುತ್ತಾಳೆ – ಎಲ್ಲಾ ಜೀವಗಳೂ ಮುಖ್ಯ ಎಂದು ನೋಡಲ್ಪಡುವ ವಿಶ್ವಕ್ಕಾಗಿ ಜಮ್ಲೊ ಹೆಜ್ಜೆ ಹಾಕುತ್ತಲೇ ಇರುತ್ತಾಳೆ.