Description
ಹಬ್ಬಗಳಲ್ಲಿ ಹಾಗೂ ಉತ್ಸವಗಳಲ್ಲಿ ಮಕ್ಕಳಿಂದ ಹಿಡಿದು ಹಿರಿಯರೂ ಹಾರಿಸುವ, ಗಾಳಿಪಟದ ಕಾಳಗ ಮುಂತಾಗಿ ಅನೇಕ ರೀತಿಯಲ್ಲಿ ಮನರಂಜಿಸುವ ಕ್ರಿಯೆಗಳ ಹಿಂದೆ ಸರಿಯಾದ ಹಾಗೂ ಆಕರ್ಷಕವಾಗಿ ಹಾರಬಲ್ಲ ವೈವಿಧ್ಯಮಯ ಗಾಳಿಪಟಗಳ ತಯಾರಿಕೆಯ ಹಿಂದಿನ ತಾಂತ್ರಿಕತೆಯ ಹಾಗೂ ವೈಜ್ಞಾನಿಕ ಅಂಶಗಳ ವಿವೇಚನೆಯೂ ಬಹುಮುಖ್ಯವಾಗಿರುತ್ತವೆ. ಸ್ವಾರಸ್ಯಮಯ ಹಾಗೂ ಉಪಯುಕ್ತ ಅಂಶಗಳನ್ನು ಈ ಪುಸ್ತಕದಲ್ಲಿ ಸಾಕಷ್ಟು ಮಾಹಿತಿಗಳೊಡನೆ ವಿವೇಚಿಸಲಾಗಿದೆ.
ಕೇವಲ ಆಟದ ವಸ್ತು ಎಂದುಕೊಳ್ಳುವ ನಾವು ಗಾಳಿಪಟಗಳ ಇತಿಹಾಸ, ರಚನೆ, ಹಾರಾಟದ ತತ್ವಗಳು, ವೈಜ್ಞಾನಿಕತೆ ಇವುಗಳ ಬಗ್ಗೆ ಯೋಚಿಸುವುದಿಲ್ಲ. ಆದರೆ ಗಾಳಿಪಟದ ನಿರ್ಮಾತೃ, ಗಾಳಿಪಟದ ವಿನ್ಯಾಸ, ಹಾರಾಟದ ವೈಜ್ಞಾನಿಕತೆ ಮುಂತಾದ ಮಾಹಿತಿಗಳನ್ನು ಆಕರ್ಷಕ ರೀತಿಯಲ್ಲಿ ತೆರೆದಿಡುವ ಮತ್ತು ತಿಳಿವಳಿಕೆಗೆ ಪೂರಕವಾದ ಉಪಯುಕ್ತ ಪುಸ್ತಕವಿದು.