Description
ಕುಂಭಕರ್ಣನನ್ನು ದುಶ್ಲೇಷ್ಟೆಯಿಂದ ದೂರವಿಡಲು ಇದ್ದಿದ್ದ ಒಂದೇ ದಾರಿ ಎಂದರೆ ಅವನು ಇಪ್ಪತ್ತು ನಾಲ್ಕು ಘಂಟೆಗಳ ಕಾಲವೂ ನಿದ್ದೆಮಾಡಬೇಕಾದುದು! ಈ ಧಾಂಡಿಗನನ್ನುಎಬ್ಬಿಸಲು ಏನು ಮಾಡಲೂ ಆಗುತ್ತಿರಲಿಲ್ಲ. ಕಹಳೆ ಊದಿದರೂ ಇಲ್ಲ, ಆನೆಗಳ ತುಳಿದಾಟ, ಮದ್ದಳೆಗಳ ಬಡಿತ, ಚೂರು ಬಂಡೆಗಳ ಮಳೆ, ಯಾವುದಕ್ಕೂ ಅವನು ಏಳುತ್ತಿರಲಲ್ಲ. ಆದರೆ ಹೊಸತಾಗಿ ಮಾಡುತ್ತಿರುವ ಅಡುಗೆಯ ಸುವಾಸನೆ ಮೂಗಿಗೆ ಮುಟ್ಟಿದರೆ ಮಾತ್ರ ಅವನು ತಟಕ್ಕನೆ ಏಳುತ್ತಿದ್ದ! ಏನೇ ಆಗಲಿ ಅಯೋಧ್ಯೆಯ ಬಲಶಾಲಿಯಾದ ರಾಮನು ಮಾತ್ರ ಅವನಿಗೋಸ್ಕರ ಕಾದು ಕುಳಿತಿದ್ದನು.