Description
ಮಹಾಭಾರತದಲ್ಲಿ ಕರ್ಣನು ಎಲ್ಲರಿಗಿಂತ ತೀಕ್ಷಣವಾದ ಕಥಾಪಾತ್ರ, ಅವನ ಉಧಾರತೆಯೇ ಅವನಿಗೆ ಒಂದು ಕುಂದಾಯಿತು, ರಾಜಕುಮಾರಿಯಾದ ಕುಂತಿಗೂ ಮತ್ತು ಸೂರ್ಯ ದೇವರ ಮಗನಿಗೂ ಹುಟ್ಟಿದ್ದರೂ, ಅವನು ಬೆಳದಿದ್ದು ಒಬ್ಬ ದೀನ ಸಾರಥಿಯ ಮಗನಾಗಿ, ಅವನ ಪ್ರತಿಭೆ ಮತ್ತು ಮಹತ್ವಾಕಾಂಕ್ಷೆ ಅವನನ್ನು ಕೊರಗಲೂ ಬಿಡಲಿಲ್ಲ ಮತ್ತು ಅನಾಮಧೇಯನಾಗಿ ಇರಲೂ ಬಿಡಲಿಲ್ಲ. ಕೌರವ ರಾಜಕುಮಾರನಾದ ದುರ್ಯೋಧನ ಅವನ ಧನುರ್ವಿದ್ಯೆಯ ಸಾಮರ್ಥ್ಯವನ್ನು ಅರಿತು ಅವನನ್ನು ಅಂಗದೇಶಕ್ಕೆ ಮಹಾರಾಜನನ್ನಾಗಿ ಮಾಡಿದನು. ಇದರಿಂದ ಕರ್ಣನು ಕೊನೆಯವರೆಗೆ ಅವನಿಗೆ ಚಿರಋಣಿಯಾಗಿದ್ದನು.