Description
ಓರಿಗಾಮಿ’ ಎಂಬ ಜಪಾನಿ ಭಾಷೆಯ ಶಬ್ದದ ಅರ್ಥ ಹಾಳೆಯನ್ನು ಮಡಚುವುದು ಎಂದು ಸಾವಿರಾರು ವರ್ಷಗಳ ಹಿಂದೆ ಜಪಾನೀ ರಾಜ ಮನೆತನದವರು ಈ ಕಲೆಯನ್ನು ಕಾಲಕ್ಷೇಪಕ್ಕಾಗಿ ಬಳಸಿಕೊಳ್ಳುತ್ತಿದ್ದರಾದರೂ ನಂತರ ಇದು ಜನ ಸಾಮಾನ್ಯರು ‘ಕಲಿಯುವ’ ಮತ್ತು ‘ಕಲಿಸುವ’ ‘ಜಾನಪದ ಕಲೆಯಾಗಿ ಮಾರ್ಪಟ್ಟು ಇಡೀ ಜಗತ್ತಿನಾದ್ಯಂತ ಹರಡಿಕೊಂಡಿದೆ. ಹಾಳೆಗಳನ್ನು ಕ್ರಮ ಪ್ರಕಾರವಾಗಿ ಮಡಚಿ ಬೇರೆ ಬೇರೆ (ಪ್ರಾಣಿ, ಪಕ್ಷಿ, ವಾಹನ, ಮನೆ, ಗಿಡ, ಮರ, ಎಲೆ, ಮುಂತಾದ) ಆಕೃತಿಗಳನ್ನು ತಯಾರಿಸಿ, ಮಕ್ಕಳಿಗೆ ಆಡಲು ಕೊಡಬಹುದು. ಮಕ್ಕಳು ಈ ಕಲೆಯನ್ನು ಕಲಿತು ಹವ್ಯಾಸವಾಗಿ ಮಾಡಿಕೊಂಡರೆ ಅವರಲ್ಲಿನ ಒಂಟಿತನವು ದೂರವಾಗುವುದು. ಈ ಕಲೆಯು ಉತ್ತಮ ಕಾಲಕ್ಷೇಪದ ಜೊತೆ ಜೊತೆಗೆ ವಿವಿಧ ರೀತಿಯ ಆಕೃತಿಗಳನ್ನು, ಉಡುಗೊರೆಗಳನ್ನು ಮತ್ತು ಅಲಂಕಾರಿಕ ವಿನ್ಯಾಸಗಳನ್ನು ತಯಾರಿಸುವ ಜಾಣ್ಮೆಯನ್ನು ಮಕ್ಕಳಲ್ಲಿ ಕರಗತಗೊಳಿಸುವುದು.
ಪುಟ್ಟ ಮಕ್ಕಳು ಬರೆಯಲು ಕಲಿಯುವ ಮುನ್ನ ಈ ಕಲೆಯನ್ನು ಅಭ್ಯಾಸ ಮಾಡಿದ್ದರೆ, ಕೈ ಬೆರಳುಗಳ ಸ್ನಾಯುಗಳು ಸುಲಲಿತವಾಗಿ ಚಲಿಸಿ, ಮುಂದೆ ಬರೆಯಲು ಸಹಕಾರಿಯಾಗುವುದು. ಮಕ್ಕಳು ಈ ಕಲೆಯನ್ನು ಕಲಿತು ಅಭ್ಯಾಸ ಮಾಡುವುದರಿಂದ ಅವರಲ್ಲಿ ಸೃಜನ ಶೀಲತೆ, ಬಹಳ ಸಹಕಾರಿಯಾಗುವುದು.
ಮಕ್ಕಳು ಈ ಕಲೆಯನ್ನು ಕಲಿತು ಅಭ್ಯಾಸ ಮಾಡುವುದರಿಂದ ಅವರಲ್ಲಿ ಸೃಜನ ಶೀಲತೆ, ಏಕಾಗ್ರತೆ, ಸಮಸ್ಯೆಗಳಿಗೆ ಪರಿಹಾರ ಹುಡುಕುವ ಬಗೆ, ತಾಳ್ಮೆ, ಒಂದೆಡೆ ಕುಳಿತು ಕಾರ್ಯವನ್ನು ಸಮರ್ಪಕವಾಗಿ ಪೂರ್ಣಗೊಳಿಸುವ ಸಾಮರ್ಥ್ಯ, ವಿವೇಚನಾ ಶಕ್ತಿಗಳೆಲ್ಲವೂ ವೃದ್ಧಿಯಾಗುವುವು. ಕನ್ನಡವನ್ನು ಕಲಿತ ಮಕ್ಕಳೆಲ್ಲ ಈ ಕಲೆಯನ್ನು ಕಲಿತು ಅದರ ಉತ್ತಮ ಲಾಭವನ್ನು ಪಡೆಯಲೆಂಬ ಉತ್ಕಟಾಕಾಂಕ್ಷೆಯಿಂದ ಈ ಕಲೆಯನ್ನು ಮೊದಲ ಬಾರಿಗೆ ಕನ್ನಡದಲ್ಲಿ ಬರೆದು, ಪರಿಚಯಿಸುತ್ತಿದ್ದೇನೆ.