E-kali

ಅಕ್ಬರ್ ಬೀರಬಲರ ಕಥೆಗಳು

180.00

Categories: ,

Description

ಅಕ್ಟರ್ ಚಕ್ರವರ್ತಿಯ ಆಸ್ಥಾನದಲ್ಲಿದ್ದ ನವರತ್ನಗಳಲ್ಲಿ ಬೀರಬಲ್ ಅತ್ಯಂತ ಪ್ರಮುಖನಾದವನು.ಅವನು ತನ್ನ ಚಾಣಾಕ್ಷತನ, ಸಮಯಸ್ಫೂರ್ತಿ, ವಿವೇಚನೆ ಮತ್ತು ಹಾಸ್ಯಮನೋಭಾವಗಳಿಂದ ಅಕ್ಟರ್ ಚಕ್ರವರ್ತಿಯ ವಿಶ್ವಾಸಕ್ಕೆ ಪಾತ್ರನಾಗಿದ್ದ.

ಅನೇಕ ಸಲ ಅಕ್ಟರ್‌ಚಕ್ರವರ್ತಿ ಬೀರಬಲನಿಗೆ ವಿಚಿತ್ರ ಪ್ರಶ್ನೆಗಳನ್ನು ಕೇಳುತ್ತಿದ್ದ. ಅವನನ್ನು ಟೀಕಿಸಲು, ಅಪಹಾಸ್ಯಕ್ಕೀಡುಮಾಡಲು ಸಮಯವನ್ನು ಕಾಯುತ್ತಿದ್ದ. ಎಲ್ಲ ಸಂದರ್ಭಗಳಲ್ಲಿಯೂ ಬೀರಬಲ ತನ್ನ ಚಾಣಾಕ್ಷತನದಿಂದ ಗೆಲುವನ್ನು ಸಾಧಿಸುತ್ತಿದ್ದ. ಚಕ್ರವರ್ತಿಯೇ ತಲೆತಗ್ಗಿಸುವಂತೆ ಮಾಡುತ್ತಿದ್ದ.

ಚಕ್ರವರ್ತಿಯ ಹಾಗೂ ಆಸ್ಥಾನದ ಗೌರವ ಹೋಗುವಂಥ ಸಂಧಿಗ್ಧದ ಸಂದರ್ಭಗಳಲ್ಲಿ ಬೀರಬಲ ತನ್ನ ಜಾಣ್ಮೆಯಿಂದ, ಚಾಣಾಕ್ಷತನದಿಂದ ಅವರೆಲ್ಲರ ಗೌರವವನ್ನು ರಕ್ಷಿಸುತ್ತಿದ್ದ. ಶ್ರೀಸಾಮಾನ್ಯರ, ಪ್ರಾಮಾಣಿಕರ ಬಗೆಗೆ ಅವನಿಗೆ ವಿಶೇಷ ಅನುಕಂಪ, ಅವರನ್ನು ಶಿಕ್ಷೆಯಿಂದ, ಸಮಸ್ಯೆಗಳಿಂದ ಕಾಪಾಡುತ್ತಿದ್ದ. ಅಕ್ಬರ್-ಬೀರಬಲರಿಗೆ ಸಂಬಂಧಿಸಿದ ಈ ಕಥೆಗಳು ಚಾರಿತ್ರಿಕವಾದವು ಎಂದು ಅಧಿಕೃತವಾಗಿಲ್ಲ. ಆದರೆ ಜನಜನಿತವಾಗಿ ಇವು ಅತ್ಯಂತ ಜನಪ್ರಿಯವಾಗಿವೆ. ಕಿರಿಯರಿಗೂ ಹಿರಿಯರಿಗೂ ಇವು ಮನರಂಜೆನೆಯೊಡನೆ ವಿವೇಚಿಸುವ, ಸಮಸ್ಯೆಯನ್ನು ಬಗೆಹರಿಸುವ ಮಾರ್ಗದರ್ಶನ ನೀಡುವಂತಿವೆ.

×

Hello!

Click one of our contacts below to chat on WhatsApp

× How can I help you?